ಮೈರ್ಪಾಡಿಯಲ್ಲಿ ಸಂಭ್ರಮದ ನಾಗಮಂಡಲ
ಕುಳಾಯಿ ಹೊನ್ನೆಕಟ್ಟೆಯಲ್ಲಿ ಸುತ್ತಮುತ್ತಲಿನ ಭಕ್ತರಿಂದ ಆರಾಧಿಸಿಕೊಂಡು ಬಂದಿರುವ ನಾಗ ಮೂಲ ಸ್ಥಾನದಲ್ಲಿ ಮೈರ್ಪಾಡಿ ಶಾಮ್ ಭಟ್ ಮನೆತನದ ತೊಡಬಳಿ ಮನೆಯವರಿಂದ ಪರಮ ಪೂಜ್ಯ ಚಿತ್ರಾಪುರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಚತು:ಪವಿತ್ರ ನಾಗಮಂಡಲ ಸೇವೆಯು ಸಗ್ರಿ ಗೋಪಾಲ ಕೃಷ್ಣ ಸಾಮಗ ಹಾಗೂ ಮದ್ದೂರು ಕೃಷ್ಣ ಪ್ರಸಾದ ವೈದ್ಯರಿಂದ ನಡೆಯಿತು.
ಮಧ್ಯಾಹ್ನ ಗಣಹೋಮ, ದುರ್ಗಾ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷಾ ಬಲಿ ಹಾಗೂ ನವಕ ಕಲಶಾಭಿಷೇಕ ಪ್ರಧಾನ ಹೋಮ ಹಾಗೂ ಆಶ್ಲೇಷ ಬಲಿದಾನ ಜರಗಿ ನಂತರ ಪಲ್ಲಪೂಜೆಯಾಗಿ ರಾತ್ರಿ ಕ್ಷೀರಾಭಿಷೇಕ ಪುರತ್ಸರ ಹಾಲಿಟ್ಟು ಸೇವೆಯ ವರೆಗೆ ಅನ್ನದಾನಾದಿ ಬ್ರಾಹ್ಮಣ ಆರಾಧನೆಯು ಜರಗಿತು. ರಾತ್ರಿ ಹಾಲಿಟ್ಟು ಸೇವೆ, ನಾಗ ದರ್ಶನ , ಶೃಂಗಾರ ಸಮರ್ಪಣೆ ನಂತರ ವಿದ್ಯಾವಲ್ಲಭ ತೀರ್ಥರ ನೇತೃತ್ವದಲ್ಲಿ ನಾಗಮಂಡಲ ಸೇವೆ, ಪ್ರಸಾದ ವಿತರಣೆ ನಡೆದು ಜನ ಮಾನಸದಲ್ಲಿ ಸಂಭ್ರಮ ಮನೆಮಾಡಿತು.
No comments:
Post a Comment